ನಡು ರಸ್ತೆಯಲ್ಲೇ ರಾಕ್ಷಸ ಕೃತ್ಯ; ಆಂಧ್ರದಲ್ಲಿ ಜಗನ್ ಪಕ್ಷದ ಯುವ ನಾಯಕನ ಕೊಚ್ಚಿ ಕೊಲೆ; ಕಾರಣವೇನು?

author-image
Veena Gangani
Updated On
ನಡು ರಸ್ತೆಯಲ್ಲೇ ರಾಕ್ಷಸ ಕೃತ್ಯ; ಆಂಧ್ರದಲ್ಲಿ ಜಗನ್ ಪಕ್ಷದ ಯುವ ನಾಯಕನ ಕೊಚ್ಚಿ ಕೊಲೆ; ಕಾರಣವೇನು?
Advertisment
  • ರಾತ್ರಿ 8.30ಕ್ಕೆ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬರ್ಬರ ಕೊಲೆ
  • ಮೃತ ಯುವಕ ಶೇಖ್ ರಶೀದ್ (27) ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತ
  • ‘ಜನರ ಜೀವಕ್ಕೆ ರಕ್ಷಣೆ ಎಲ್ಲಿದೆ’ ಆಕ್ರೋಶ ಹೊರ ಹಾಕಿದ ಜಗನ್ ಮೋಹನ್ ರೆಡ್ಡಿ

ಗುಂಟೂರು: ವೈಎಸ್‌ಆರ್‌ಸಿ ಪಕ್ಷದ ಯುವ ಘಟಕದ ಸದಸ್ಯನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಪಲ್ನಾಡು ಜಿಲ್ಲೆಯ ವಿನುಕೊಂಡದಲ್ಲಿ ಕಳೆದ ಬುಧವಾರ ರಾತ್ರಿ ನಡೆದಿದೆ. ಈ ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಶೇಖ್ ರಶೀದ್ (27) ಮೃತ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತ.

publive-image

ಇದನ್ನೂ ಓದಿ:ರೀಲ್ಸ್​ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು

ರಾತ್ರಿ 8.30ರ ಸುಮಾರಿಗೆ ಶೇಖ್ ರಶೀದ್ ಮನೆಗೆ ವಾಪಸಾಗುತ್ತಿದ್ದ. ಹೆಚ್ಚು ಜನಸಂದಣಿ ಇರುವ ಮಂಡ್ಲ ಮುಡಿ ಬಸ್ ನಿಲ್ದಾಣದ ಕೇಂದ್ರದಲ್ಲಿ ನಿಂತು ಕೊಂಡಿದ್ದ ಶೇಖ್ ಜಿಲಾನಿ ಎಂಬಾತನ ಮೇಲೆ ಜಿಲಾನಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಭಯಾನಕ ಕೊಲೆಯ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡ ರಶೀದ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೋತ್ತಿಗೆ ರಶೀದ್​​ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತನನ್ನು ವಿನುಕೊಂಡ ಪಟ್ಟಣದ ನಿವಾಸಿ ಶೇಖ್ ರಶೀದ್ ಎಂದು ಗುರುತಿಸಲಾಗಿದೆ. ಇನ್ನು ಈ ಕೃತ್ಯವನ್ನು ಖಂಡಿಸಿದ ವೈಎಸ್‌ಆರ್‌ಸಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.


">July 18, 2024


ರಾಜ್ಯದಲ್ಲಿ ರಾಕ್ಷಸರ ಅಟ್ಟಹಾಸ ಮುಂದುವರೆದಿದೆ. ಕಾನೂನು ಸುವ್ಯವಸ್ಥೆ ಎಲ್ಲೂ ಕಾಣುತ್ತಿಲ್ಲ. ಜನರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ವೈಎಸ್‌ಆರ್‌ಸಿಪಿಯನ್ನು ದುರ್ಬಲಗೊಳಿಸಲು ಈ ದೌರ್ಜನ್ಯಗಳನ್ನು ಮಾಡಲಾಗುತ್ತಿದೆ. ಹೊಸ ಸರ್ಕಾರ ಬಂದ ಒಂದೂವರೆ ತಿಂಗಳಲ್ಲೇ ಆಂಧ್ರಪ್ರದೇಶ ರಾಜಕೀಯ ಪಕ್ಷಗಳ ಕೊಲೆ, ಅತ್ಯಾಚಾರ, ದಾಳಿ, ವಿಧ್ವಂಸಕ ಕೃತ್ಯಗಳ ವಿಳಾಸವಾಯಿತು. ನಿನ್ನೆ ನಡೆದ ವಿನುಕೊಂಡ ಕೊಲೆ ಘಟನೆ ಇದರ ಪರಮಾವಧಿ. ರಸ್ತೆಯಲ್ಲಿ ನಡೆದ ಈ ದಾರುಣ ಘಟನೆ ಸರ್ಕಾರಕ್ಕೆ  ನಾಚಿಕೆಗೇಡು. ಮುಖ್ಯಮಂತ್ರಿ ಸೇರಿದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದವರು ರಾಜಕೀಯ ದುರುದ್ದೇಶದಿಂದ ಇಂತಹ ದುಷ್ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಯಾವ ಮಟ್ಟದಲ್ಲಿ ಅವರು ಕೆಂಪು ಪುಸ್ತಕದ ಸಂವಿಧಾನವನ್ನು ಜಾರಿಗೆ ತಂದರು ಮತ್ತು ಪೊಲೀಸ್ ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ದುರ್ಬಲಗೊಳಿಸಿದರು. ಇದರಿಂದ ಕ್ರಿಮಿನಲ್​ಗಳು, ಕೊಲೆಗಡುಕರು ಹಾವಳಿ ಹೆಚ್ಚಾಗಿದೆ. ಅಧಿಕಾರ ಶಾಶ್ವತವಲ್ಲ ಮತ್ತು ಹಿಂಸಾತ್ಮಕ ನೀತಿಗಳನ್ನು ಕೈಬಿಡಬೇಕು ಎಂದು ನಾನು ಚಂದ್ರಬಾಬುಗೆ ಬಲವಾಗಿ ಎಚ್ಚರಿಸುತ್ತೇನೆ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಕೇಂದ್ರ ಸರ್ಕಾರಿ ಸಂಸ್ಥೆಗಳೊಂದಿಗೆ ವಿಶೇಷ ತನಿಖೆಯ ಅಗತ್ಯವಿದೆ. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಮನಹರಿಸುವಂತೆ ನಾನು ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ. ಯಾವುದೇ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಎದೆಗುಂದುವುದಿಲ್ಲ ಮತ್ತು ನಾವು ಅವರನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ವಿನುಕೊಂಡದಲ್ಲಿ ಟಿಡಿಪಿ ಕಾರ್ಯಕರ್ತರಿಂದ ಹತ್ಯೆಗೀಡಾದ ರಶೀದ್ ಕುಟುಂಬಕ್ಕೆ ನನ್ನ ತೀವ್ರ ಸಂತಾಪ.

- ವೈಎಸ್ ಜಗನ್ ಮೋಹನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ

ಇದನ್ನೂ ಓದಿ: ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?

ಮೃತ ವ್ಯಕ್ತಿ ಹಾಗೂ ಆರೋಪಿ ನಡುವೆ ವೈಯಕ್ತಿಕ ದ್ವೇಷದಿಂದ ಈ ಕ್ರೂರ ಕೊಲೆ ನಡೆದಿದೆ. ಈ ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment